Unlock 7 Day Free Trial of exclusive premium membership for just $2!

Start Free Trial

Power Star- Nimage Gottillada Appu

ಪುನೀತ್‌ ರಾಜ್‌ಕುಮಾರ್‌ ಅನ್ನೋ ನಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇಷ್ಟೊಂದು ಹತ್ತಿರವಾಗಿದ್ದು ಹೇಗೆ ಹೇಗೆ? ಪುನೀತ್‌ ಅವರೊಂದಿಗೇ ಬೆಳೆದು ಬಂದ ಒಂದು ಜನರೇಶನ್‌ ಅವರ ಸಿನಿಮಾಗಳನ್ನು ನೋಡ್ತಾ, ಮೆಚ್ಚಿಕೊಳ್ತಾ, ಆ ಸಿನಿಮಾಗಳ ಪ್ರಭಾವಕ್ಕೊಳಗಾಗಿ ಅದರಲ್ಲಿನ ಒಳ್ಳೆತನ, ಆದರ್ಶಗಳನ್ನು ತನ್ನದಾಗಿಸಿಕೊಳ್ತಾ ಬಂದ್ರೆ, ಡಾ. ರಾಜ್‌ಕುಮಾರ್‌ ಚಿತ್ರಗಳನ್ನು ಇಷ್ಟಪಡ್ತಿದ್ದ ಅವರ ಕಾಲದ ಜನರೇಶನ್‌, ಅಂದ್ರೆ ಈಗಿನ ಹಿರಿತಲೆಗಳು ಪುನೀತ್‌ ಚಿತ್ರಗಳಲ್ಲೇ ಅಣ್ಣಾವ್ರನ್ನು ಹುಡುಕಿ ಅಪ್ಪುವನ್ನು ಮನೆಮಗನಂತೆ ಅಪ್ಪಿಕೊಳ್ತು. ಈಗಿನ ಮೂರನೇ ತಲೆಮಾರಿನ ಪುಟಾಣಿಗಳಿಗೂ ಹಾಡು, ಫೈಟು, ಡಾನ್ಸ್‌ಗಳ ಮೂಲಕ ‘ಅಪ್ಪು’ ಇಷ್ಟವಾದ್ರು. ಚಿಲ್ಟುಗಳ ಸೂಪರ್‌ಮ್ಯಾನ್‌, ಹೆಂಗಳೆಯರ ಕಣ್ಣಿಗೆ ಆದರ್ಶ ಪುರುಷ ಮತ್ತು ಪ್ರೀತಿಯ ಸಹೋದರ, ಯುವಕರ ಪಾಲಿನ ಐಕಾನ್‌, ಯುವತಿಯರ ಕನಸಿನ ರಾಜಕುಮಾರ, ಹಿರಿಯರಿಗೆ ಸ್ವಂತ ಮನೆಮಗನಂತಾಗಿದ್ದ ಪುನೀತ್‌, ಡಾ. ರಾಜ್‌ಕುಮಾರ್‌ ಅಗಲಿಕೆಯ ನಂತರ ಕೂಡಾ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಚಿರಸ್ಥಾಯಿ. ಅವ್ರ ವೈಯಕ್ತಿಕ ಬದುಕಿನ, ಚಿತ್ರ ಜೀವನದ ಕಥೆ ನಿಮಗಾಗಿ!

Cast

Sudesh R Bhat
Sudesh R Bhat

voice artist

Kshama NA
Kshama NA

director

Reverb Inc.
Reverb Inc.

content consultant

Reverb Inc.
Reverb Inc.

production house